Friday, September 12, 2008

ಮಳೆ ನಿಂತು ಹೋದ ಮೇಲೆ..........


ಮಟ್ಟ ಮಟ್ಟ ಮದ್ಯಾಹ್ನ ಊಟ ಮುಗಿಸಿ ಕುಳಿತ್ತಿದ್ದ ನನಗೆ ತಕ್ಷಣ ನನ್ನ ಸ್ನೆಹಿತನ ನೆನಪಾಯಿತು ಸರಿ ಹೊರಗಡೆ ತಿರುಗಾಡಿ ಬರೊಣವೆಂದು ಅವನಿಗೆ ಒಂದು ಪೋನ್ ಮಾಡಲು ಪೋನ್ ಕೈಗೆತ್ತುಕೊಂಡು ಅವನ ಮೊಬೈಲ್ ಸಂಖ್ಯೆಗಳನು ಒತ್ತುತ್ತಿದ್ದೆ ಅಷ್ಟರಲ್ಲಿ ಹೊರಗಡೆ ಮುನ್ಸುಚನೆ ಇಲ್ಲದೆ ಮಳೆ ಬರಲು ಶುರುವಾಯಿತು.ಸ್ನೆಹಿತನಿಗೆ ಪೋನ್ ಹಚ್ಚಿದೆ ಮೂದಲ ಬಾರಿ ನಾಟ್ ರಿಚೆಬಲ್ ಅಂತ ಆ ಕಡೆಯಿಂದ ಹೆಣ್ಣಿನ ದ್ವನಿಯಲ್ಲಿ ಕೇಳಿತು.ಮತ್ತೊಮ್ಮೆ ಪ್ರಯತ್ನಿಸಿದೆ ಆಗ ಪೋನ್ ರಿಂಗ್ ಆಗ ತೊಡಗಿತು ಖುಷಿಯಿಂದ ಎಲ್ಲಿದ್ದಿಯ ಅಂತ ಕೇಳಿದೆ ನಾನು ಮನೆಯಲ್ಲೆ ಇದ್ದಿನಿ ಅಂತ ಹೇಳಿದ ನನಗೊ ಅನಿಸಿದಂತೆ ಅವನಿಗು ಸಹ ಬೋರ್ ಆಯಿತೆಂದು ಕಾಣುತ್ತದೆ ಬಾ ಹೀಗೆ ಒಂದು ರೌಂಡ್ ಹೊಗಿ ಬರೊಣವೆಂದು ಕರೆದೆ ಆಯ್ತು ಬರುತೆನೆ ಅಂದ.ಮಳೆ ಬರುತ್ತಿದ್ದರಿಂದ ನಮ್ಮ ಮನೆಯಿಂದ ೫ ಕೀ.ಮಿ ದೂರದಲ್ಲಿರುವ
ಕೆರೆಯ ಹತ್ತಿರ ಹೋಗೊಣವೆಂದು ಹೊರಟೆವು.ನಮ್ಮಗೆ ಬಿಡುವಿನ ವೇಳೆಯಲ್ಲಿ ಅತ್ಯಂತ ಪ್ರೀಯವಾದ ಸ್ಥಳವು ಅದಾಗಿತ್ತು. ಅಂದು ಮಳೆಯಲ್ಲಿ ಹತ್ತಿರದಿಂದ ಕೆರೆಯ ಸೌಂದರ್ಯವನ್ನು ಸವೆಯುವ ಆಸೆ ನಮ್ಮದಾಗಿತ್ತು. ಆದರೆ ಮಳೆಯ ಅರ್ಭಟ ಮಾತ್ರ ಇನ್ನು ಹೆಚ್ಚಾಗ ತೊಡಗಿತು.ಮುಗಿಲಿನ ಸಂಗೀತಕ್ಕೆ ಮಳೆಯು ಚಿಟ.....ಪಟ.....ಚಿಟ...ಪಟ........ಅಂತ ಸಾಹಿತ್ಯ ಹಾಡುತ್ತಿತು
ಮುಗಿಲು ಮತ್ತಷ್ಟು ಗೊಗರಯಲು ತಾನೆನು ಕಮ್ಮಿ ಎಂಬಂತೆ ಮಳೆಯು ಸಹ ಅಂದು ರುದ್ರ ನರ್ತನವನ್ನೆ ಹಾಡಿತು.ಹಾದಿಯಲ್ಲಿ ನಮ್ಮ ಏರಿಯಾದ ಹಿರಿಯರೆಲ್ಲ ಚಳಿಗೆ ಮಳೆಗೆ ಹಿಡಿ ಶಾಪ ಹಾಕುತ್ತ ಗೊಡು ಸೇರುತ್ತಿದ್ದರೆ ಮಕ್ಕಳು ಮಾತ್ರ ಶಾಲೆ ಬಿಟ್ಟರು ಮನೆ ತೆರಳುವ ಮನಸ್ಸಿಲ್ಲದೆ ಪ್ರಪಂಚದ ಪರಿಯಿಲ್ಲದೆ ಮಳೆಯಲ್ಲಿ ಹಾಡುತ್ತಿದ್ದವು. ನಾವು ಕಾತುರದಿಂದ ಕೆರೆಯ ಸೊಬಗನು ನೊಡುವ ಆತುರದಲ್ಲಿ ಬೇಗ ಅತ್ತ ದಾವಿಸೆದೆವು. ಮಳೆಯು ಮತ್ತು ಕೆರೆಯು ಸ್ನೆಹಿತರೆಂಬಂತೆ ಹನಿಗಳಲ್ಲಿ ಚಿಟ..........ಪಟ.......... ಮಾತು ನಡೆಯುತ್ತಿತ್ತು. ಬಹಳ ಅತ್ಮಿಯವೆಂಬಂತೆ ಆ ಕೆರೆಯು ಮೈ ಚಾಚಿ ಮಳೆಯನ್ನು ತಬ್ಬಿಕೊಂಡತೆ ಕಾಣುತ್ತಿತು ಆ ದೃಶ್ಯ. ಆ ಕೆರೆಯ ಸೊಬಗನು ಇಂದು ಕಂಡತೆ ಹಿಂದೆದು ಕಂಡಿರಲ್ಲಿಲ್ಲ. ಆ ದೃಶ್ಯವನ್ನು ಹಾಗೆ ಕಣ್ ತುಂಬಿ ಕೊಳ್ಳುತ್ತ ಅಲ್ಲೆ ಒಂದು ಚಾವಣಿಯ ಕಳಗೆ ನಿಂತೆವು.... ಆಗಸದಲ್ಲಿ ಹಕ್ಕಿಗಳು ತಮ್ಮ ತಮ್ಮ ಗೂಡು ಸೇರುವ ತವಕದಲ್ಲಿ ದಾವಿಸುತ್ತಿದ್ದವು. ಹಾಗೆ ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಯಿತು.ಅದುವರೆಗು ಜಡ ಹಿಡಿದ ಕೆಲಸಗಳಿಗೆಲ್ಲ ಮತ್ತೆ ಚಾಲನೆ ಸಿಕ್ಕಿತು ರಸ್ತೆಯಲ್ಲಿ ಮತ್ತೆ ವಾಹನಗಳ ಸದ್ದು ಕೇಳಿಬರುತ್ತಿತ್ತು. ಅದುವರೆಗು ಮಳೆಯಲ್ಲಿ ಆಟ ಹಾಡಿದ ಮಕ್ಕಳು ಮಳೆಯ ಮೇಲೆ ಮುನಿಸಿಕೊಂಡು ಮತ್ತೆ ಮನೆಗಳ್ಳತ್ತ ದೌಡಾಯಿಸಿದರು.
ನಾನು ಮತ್ತು ನನ್ನ ಸ್ನೆಹಿತ ಅಲ್ಲೆ ಸ್ವಲ್ಪ ಹೊತ್ತು ಬೇರೆ ವಿಷಯಗಳ ಬಗ್ಗೆ ಮಾತಾಡ ತೊಡಗಿದೆವು. ಹತ್ತಿರದೆಲ್ಲೆ ಇದ್ದ ಒಂದು ಮರದೆಲ್ಲಿ ಕೂ...ಕೂ....ಕೂ............ಎಂದು ಕೊಗಿಲೆಯು ತನ್ನ ಸವಿಯಾದ ಕಂಠದಲ್ಲಿ ನಮ್ಮಗೆ ಸಂಗೀತ ಉಣಬಡಿಸಿತು.ಆಗ ಮಳೆಯು ಸಂಪೂರ್ಣವಾಗಿ ನಿಂತಿತ್ತು. ಆದರು ಮರವು ಮೈಕೊಡವಿದಂತೆ ಎಲೆಗಳಿಂದ ಹನಿ ತೊಟ್ಟಿಕ್ಕುತ್ತಿದ್ದವು. ಹಾಗೆಯೇ ಆ ಕೊಗಿಲೆಯು ಬೀಳುತ್ತಿದ್ದ ಹನಿಗಳಿಗೆ ಸಾಹಿತ್ಯ ಹೊಂದಿಸುತ್ತಿತ್ತು. ತಕ್ಷಣ ಆ ಕೊಗಿಲೆಯು ಪಕ್ಕದಲ್ಲಿದ ವಿದ್ಯುತ್ ಕಂಬದ ಮೇಲೆ ಹಾರಿತು ನೋಡು ನೋಡುತ್ತಿದ್ದಂತೆ ಶಾರ್ಟ್ ಸರ್ಕಿಟ್ ಆಗಿ ಸ್ಥಳದಲ್ಲಿಯೆ ಅಸುನೀಗಿತು.....
ಇಷ್ಟು ಹೊತ್ತು ಆ ಸ್ಥಳವನ್ನು ಸಂಗೀತಮಯದಿಂದ ತುಂಬಿಸಿದ ಒಂದು ಜೀವ ಕಣ್ಮುಂದೆಯೆ ಅದರ ಹಾಡು ಅಂತ್ಯವಾಯಿತು. ನೀರವ ಮೌನ ಅವರಿಸಿತು
ಆದರೆ ಆ ಜೀವ ಹಾಡುತ್ತಿದ್ದಾಗ ಎಷ್ಟು ಜನರ ಕಿವಿಗೆ ಮುದತಂದಿತೊ ಗೊತ್ತಿಲ್ಲ ಆದರೆ ಸತ್ತಿದ್ದಕ್ಕೆ ಯಾರು ಕಣ್ಣಿರಿಡುತ್ತರೊ ಗೊತ್ತಿಲ್ಲ ಆ ಕೆರೆಯ ಬಳಿಯಲ್ಲಿದ್ದ ಮರಗಳಿಂದ ಹನಿಗಳು ಮಾತ್ರ ಜೀನುಗುತ್ತಿತ್ತು......ಅದು ನಮ್ಮಗೆ ಹಾಗ ಕಂಡದ್ದು ಕಣ್ಣೀರಿನಂತೆ..ಆ ಕೆರೆಯು ಸಹ ಕಣ್ಣೀರಿಟ್ಟು ತುಂಬಿಸಿ ಕೊಂಡಂತೆ ಬಾಸವಾಗುತ್ತಿತ್ತು. ಆಗ ಮುಗಿಲು ಸಹ ಮತ್ತೆ ಅಳಲು ಶುರುಮಾಡಿತು. ಹೀಡಿ ಆ ಪ್ರಕೃತಿಯೆ ಆ ಜೀವಕ್ಕೆ ಶ್ರದ್ದಾಂಜಲಿ ಸಲ್ಲಿಸಿದಂತೆ ಬಾಸವಾಗುತ್ತಿತ್ತು. ಕ್ಷಣ ಮಾತ್ರದಲ್ಲಿ ಕತ್ತಲು ಆವರಿಸತೊಡಗಿತು.....

2 comments:

Anonymous said...

hello dhananjaya nimma lekhana tumba cennagide...

dhanu said...

thank you