Saturday, September 13, 2008

"ಅಪಶಕುನ"


ನಮ್ಮ ಜಾಗತಿಕರಣದ ಯುಗದಲ್ಲಿ ಎಷ್ಟೆ ಮುಂದುವರೆದರು ಮೊಡನಂಬಿಕೆಗಳಿಗೆ ಮಾತ್ರ ಬರವಿಲ್ಲ ಮಾನವ ಹೇಗೆ ಈ ಅಂಟು ರೋಗಕ್ಕೆ ಅಂಟಿಕೊಂಡಿರುವನೆಂದರೆ ಅದು ಮುಂಜಾನೆಯಿಂದಲೆ ಶುರು ಎಡಗಡೆ ಏಳಬಾರದು ಕೆಟ್ಟದ್ದಾಗುತ್ತದೆ.ಬೆಕ್ಕಿನ ಮುಖವನ್ನು ನೋಡಬಾರದು ಅಪಶಕುನ ಅನ್ನುತ್ತರೆ ಆದರೆ ಮನೆಯಲ್ಲಿಯೆ ಬೆಕ್ಕು ಸಾಕಿರುತ್ತಾರೆ. ಎಡಗೈಯಲ್ಲಿ ಏನು ಕೊಡಬಾರದು......ಆಗದರೆ ಬಲಗೈ ಇಲ್ಲದವರ ಗತಿ ಏನು....,,,?. ಹೀಗೆ ಹಲವು ಪ್ರಶ್ನೆಗಳು ನನ್ನನ್ನು ಇನ್ನು ಕಾಡುತ್ತಿವೆ............ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ವಶೀಕರಣ.... ಮಾಟ... ಮಂತ್ರ... ತಂತ್ರ ಅಂತ ಹಣ ಕಳೆದು ಕೊಳ್ಳುವವರೆ ಹೆಚ್ಚು. ಕೊಡೊರೆ ಹೆಚ್ಚಾದರೆ ಇನ್ನು ತಗೊಳ್ಳೊರು ಕಡಿಮೆನ ಅವರು ಸಹ ಇಂದು ಹೆಚ್ಚಾಗಿ ಹೊಗಿದ್ದಾರೆ.
ಇದಕ್ಕೆ ತದ್ವಿರುದ್ದವೆಂಬಂತೆ ನಾವು ನಮ್ಮ ಮನೆಯಲ್ಲಿ ಒಂದು ಬೆಕ್ಕನು ಸಾಕಿದ್ದೆವು ನೋಡಲು ತುಂಬ ಮುದ್ದಾದ ಮರಿ ಅದು ನಮ್ಮ ಮನೆಯ ಚಲನವಲನಗಳನ್ನು ಅತ್ಯಂತ ಸೊಕ್ಷ್ಮವಾಗಿ ಅರಿತ್ತಿತ್ತು. ಎಷ್ಟೊತ್ತಿಗೆ ಹಾಲು ಬರುತ್ತೆ ನನ್ನಗೆ ಯಾವಾಗ ಹಾಲು ಬಡಿಸುತ್ತಾರೆ ಎಂಬುದನು ಚೆನ್ನಾಗಿಯೆ ತಿಳಿದಿತ್ತು. ನನಗೆ ಬಿಡುವಿನ ವೇಳೆಯಲ್ಲಿ ಅದರ ಜೊತೆ ಆಟವಾಡುತ್ತಿದ್ದರೆ ಸಮಯದ ಪರಿವೆ ಅರಿವಾಗುತ್ತಿರಲ್ಲಿಲ್ಲ.
ಆದರೆ ನಮ್ಮ ಮನೆಯಲ್ಲಿ ಎಲ್ಲರು ಸಹ ಬೆಳಗ್ಗೆ ಎದ್ದು ಅದರ ಮುಖವನ್ನೆ ನೋಡುತ್ತಿದ್ದೆವು. ಅದರಿಂದ ನಮ್ಮಗೆ ಯಾವುದೆ ರೀತಿಯ ತೊಂದರೆಗಳು ಆಗಿರಲ್ಲಿಲ್ಲ.ಅದು ನಮ್ಮ ಮನೆಯ ಸದಸ್ಯರಲ್ಲೊಂದಾಗಿತ್ತು. ನಮ್ಮಗಿಂತ ಕಮ್ಮಿ ಏನು ಎಂಬಂತೆ ನಮ್ಮ ಮನೆಯ ನಾಯಿ(ಕರಿಯ)ಯು ಸಹ ಅದರ ಜೊತೆ ಗೊಡಿ ಆಟವಾಡುತ್ತಿದ್ದರೆ ನಮ್ಮಗೆಲ್ಲ ಸಂತೋಷ
ಆದರೆ ನೋಡಲು ತುಂಬ ಚಿಕ್ಕ ವಿಷಯದಂತೆ ಕಂಡರು ಇದರ ಹಿಂದಿರುವ ಅರ್ಥ ಮಾತ್ರ ತುಂಬ ದೊಡ್ದದು.ಈ ಪ್ರಾಣಿಗಳಿಂದ ತಿಳಿಯುವುದು ನಮ್ಮಗೆ ಇನ್ನು ಬಹಳಷ್ಟಿದೆ.
ಆ ಬೆಕ್ಕು ನಮ್ಮ ಮನೆಯಲ್ಲಿನ ಎಲ್ಲರಿಗೂ ತುಂಬ ಪ್ರಿಯವಾಗಿತ್ತು.ನಾವು ಮನೆಗೆ ಬಂದ ತಕ್ಷಣ ನಮ್ಮ ಕಾಲಿನ ಬಳಿ ಬಂದು ಒಂದು ಸುತ್ತು ಸುತ್ತಿ ಹೊಗುತ್ತಿತ್ತು,ನಾವು ಸಹ ಮನೆಗೆ ಬಂದ ತಕ್ಷಣ ಅದನು ನೋಡದೆ ಹೊದರೆ ಸಮಾದಾನವಿರುತ್ತಿರಲ್ಲಿಲ್ಲ. ಹೀಗಿರುವಾಗ ನಮ್ಮ ಮನೆಗೆ ಒಮ್ಮೆ ಊರಿನಿಂದ ಅಜ್ಜಿ ಬಂದರು ಅಂದಿನಿಂದ ಶುರುವಾಯಿತು ಅಪಶಕುನ.
ಮೂದಲು ಬೆಕ್ಕು ನನ್ನ ಪಕ್ಕದಲ್ಲಿಯೆ ಮಲಗುತ್ತಿತ್ತು ಆದರೆ ನಮ್ಮಜ್ಜಿ ಬಿಡುತ್ತಿರಲ್ಲಿಲ್ಲ ಅಪಶಕುನ ಅಂತ ಬೈಯುತಾ ಇರುತ್ತಿದ್ದಳು.
ಬೆಳಗ್ಗೆ ಅದರ ಮುಖ ನೋಡಿದರೆ ಬೈಯುತಾ ಇರುತ್ತಿದ್ದಳು.ಬರೀ ಅಪಶಕುನದ ಮಾತುಗಳನ್ನು ಆಡುತ್ತಿದ್ದಳು. ಪಾಪ ಆ ಮುಗ್ದ ಜೀವಿಗೆ ಎಲ್ಲಿ ಅರ್ಥವಾಗಬೇಕು ಇದೆಲ್ಲ ಹೀಗೆ ಬೈಯುತ್ತಿರುವಾಗ ದಿಟ್ಟಿಸಿ ನೋಡಿ
ನಾನೇನು ಮಾಡ್ಲಿಲ್ಲ ಎಂದು ತನ್ನ ಬಾಷೆಯಲ್ಲಿಯೇ ಹೇಳಿ ಸುಮ್ಮನಾಗಿಬಿಡುತ್ತಿತ್ತು. ಬೈಗುಳದಿಂದ ಅದು ರೋಸಿ ಹೊಗಿತ್ತು ಅಂತ ಕಾಣುತ್ತೆ ಒಂದು ದಿನ ಎಂದಿನಂತೆ ಹೊರಗಡೆ ಹೋದ ಬೆಕ್ಕು ಮತ್ತೆ ಮನೆಗೆ ಬರಲೆ ಇಲ್ಲ. ಇದರೆಲ್ಲದ ನಡೆವೆ ನನಗೆ ಕಾಡುತ್ತಿರುವ ಪ್ರಶ್ನೆ "ಅಪಶಕುನ" ಯಾರು.............?

No comments: