Tuesday, November 11, 2008

ಅಂದು ಸಂಜೆ,


ಅಂದು ಸಂಜೆ,

ಬಿಳಿಯಾದ ಮೊಡವೆಲ್ಲ ತುಂಬಿತ್ತು
ನಾಚಿಕೆಯಾದ ಹೆಣ್ಣಿನ ಕೆನ್ನೆಯಂತೆ ಕೆಂಪಗೆ
ಅದು ರವಿ ಮುಳುಗುವ ಸಮಯ

ರವಿಯು ಇಂದಿನ ದಿನದ ಸೋಲುಗಳನು ಮರೆಸಿ
ನಾಳೆಯ ಹೊಸ ಕನಸುಗಳಿಗೆ ನಾಂದಿ
ಹಾಡಲು ಕಾತುರನಾಗಿದ್ದಾನೆ.
ಹಿಡಿ ಭಾನು ಮರೆಯಾಗುತ್ತಿರುವ ರವಿಯ ಕಂಡು
ಅತ್ತು ಅತ್ತು ಕೆಂಪಾಗದಂತೆ
ಹಕ್ಕಿಗಳೆಲ್ಲ ಬಾನಂಗಳದಿ ಚಿತ್ತಾರ ಮೂಡಿಸುತ್ತ
ತಮ್ಮ ಸೂರುಗಳಿಗೆ ಆತುರದಿಂದ
ಬರುತ್ತಿರುವುದನ್ನು ಕಂಡು

ಬರಿದಾದ ಮನದಲ್ಲಿ ತುಂಬಿತೊಂದು ಕನಸು
ಮನವೆಲ್ಲ ಹಿಗ್ಗಿ ನಲಿದಾಡಿದಂತ ಸೊಗಸು
ನನಗೆ ಯಾರು ಸಾಟಿಯಿಲ್ಲವೆಂತ ಹುಮ್ಮಸು
ಯಾವುದೋ ಚೈತನ್ಯವದು,ಮತ್ತೆ ಮತ್ತೆ
ಚಿಲುಮೆಯಂತೆ ಚಿಮ್ಮಿ ಎಟುಕದ ಕನಸುಗಳಿಗೆ
ಕೈ ಹಾಕುತ್ತಿತ್ತು.ಹೀಡಿ ಭುವಿಯೆ ಎತ್ತಿ ಹಿಡಿದಂತಹ ಅನುಭವ,

ಏಕೆಂದರೆ ಅದು "ಕನಸು"

1 comment:

shivu.k said...

ಧನಂಜಯ ಸಾರ್,

ನಾನು ಪಲ್ಲವಿಯವರ ಬ್ಲಾಗಿನಲ್ಲಿ ನಿಮ್ಮ ಕಾಮೆಂಟ್ ಓದಿ ನಿಮ್ಮ ಬ್ಲಾಗಿಗೆ ಬಂದೆ.. ನೀವು ಕವನ ಚೆನ್ನಾಗಿ ಬರೆದಿದ್ದೀರಿ... ಫೋಟೊ ಕೂಡ ಚೆನ್ನಾಗಿದೆ...
ನೀವು ನನ್ನ ಬ್ಲಾಗಿಗೊಮ್ಮೆ ಬನ್ನಿ..
http://chaayakannadi.blogspot.com/

.ಅಲ್ಲಿ ನಿಮಗಿಷ್ಟವಾದ ಫೋಟೊಗಳು ಮತ್ತು ಲೇಖನಗಳು ಸಿಗಬಹುದು
ಮತ್ತೆ ನಿಮ್ಮ ಹಳೆಯ ದಿನಪತ್ರಿಕೆಯ ವಿಚಾರವಾಗಿ ತಿಳಿಯಲು ನಾನು ಅದಕ್ಕಾಗಿ ಮತ್ತೊಂದು ಬ್ಲಾಗ್ ಮಾಡಿದ್ದೇನೆ. ಅದರಲ್ಲಿ ನಮ್ಮ ಎಲ್ಲಾ ಆಗುಹೋಗುಗಳು, ಕಷ್ಟಸುಖಗಳು, ವಿನೋದ ಇತ್ಯಾದಿಗಳು ಇವೆ ಒಮ್ಮೆ ಬೇಟಿ ಕೊಡಿ...
ವಿಳಾಸ:http://camerahindhe.blogspot.com/